ನಿಮ್ಮ ಸಂಕಷ್ಟವನ್ನು ನಮ್ಮ್ಮೊಂದಿಗೆ ಹಂಚಿಕೊಳ್ಳಿ...

ಜಗತ್ತಿನಾದ್ಯಂತ ಕೊರೊನಾ ವೈರಸ್‍ ಜನರನ್ನು ತಲ್ಲಣದ ದಂಡೆಗೆ ತಂದು ನಿಲ್ಲಿಸಿದೆ. ಬದುಕು ದುಸ್ತರವಾಗಿದೆ. ದುಡಿದು ತಿನ್ನುವ ಕೈಗಳನ್ನು ಕಟ್ಟಿ ಹಾಕುವುದರ ಜತೆಗೆ, ಜಗತ್ತಿನ ಓಟಕ್ಕೂ ಬ್ರೇಕ್‍ ಹಾಕಿದೆ. ಇದಕ್ಕೆ ಭಾರತ, ಕರ್ನಾಟಕವೂ ಹೊರತಾಗಿಲ್ಲ.

ಕಳೆದ ಐದಾರು ತಿಂಗಳಿಂದ ಕೊರೊನಾ ವೈರಸ್‍ ಮಾಡಿದ ಆವಾಂತರ ಒಂದೆರಡಲ್ಲ. ನೂರಾರು ಜನರನ್ನು ಬಲಿ ಪಡೆದುಕೊಂಡಿದೆ. ಅಸಂಖ್ಯಾತರ ಬದುಕನ್ನು ಮೂರಾಬಟ್ಟೆ ಮಾಡಿದೆ. ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡಿದ್ದರೆ, ಅನೇಕರು ಹಸಿವಿನ ಜತೆ ಇವತ್ತಿಗೂ ಹೋರಾಟ ನಡೆಸಿದ್ದಾರೆ. ರಾಜ್ಯಾದ್ಯಂತ ಸಾಕಷ್ಟು ಕಣ್ಣೀರಿನ ಕಥೆಗಳನ್ನು ನಾವು ಕೇಳಿದ್ದೇವೆ. ಹೀಗಾಗಿ ಇಂಥವರ ಜತೆ ನಾವು ನಿಂತುಕೊಳ್ಳಬೇಕಿದೆ.

ನಮ್ಮದು ಶರಣರ ನಾಡು. 12ನೇ ಶತಮಾನದಲ್ಲಿ ಶಿವಶರಣರು ದಾಸೋಹ ಪರಂಪರೆಯನ್ನು ಶುರು ಮಾಡುವ ಮೂಲಕ ಹಸಿವುಮುಕ್ತ ನಾಡನ್ನು ಕಟ್ಟಲು ಶ್ರಮಿಸಿದರು. ತುಮಕೂರಿನ ಸಿದ್ಧಗಂಗಾಶ್ರೀಗಳು ಸೇರಿದಂತೆ ನಾಡಿನ ನಾನಾ ಮಠಗಳು, ದೇವಸ್ಥಾನಗಳು ಈ ದಾಸೋಹವನ್ನು ಮುಂದುವರೆಸಿಕೊಂಡು ಬಂದಿವೆ. ಇಂತಹ ಪುಣ್ಯ ಭೂಮಿಯಲ್ಲಿ ಬದುಕುತ್ತಿರುವ ನಾವುಗಳು ಹಸಿದವರ ಹೊಟ್ಟೆಗೆ ಅನ್ನ ಒದಗಿಸುವ ಕೆಲಸ ಮಾಡಬೇಕಿದೆ.

ಬೆಂಗಳೂರು ಕಟ್ಟಿದ ನಾಡಪ್ರಭು ಕೆಂಪೇಗೌಡರು, ತಮ್ಮ ಬೆಲೆಬಾಳುವ ಜಮೀನು ಮಾರಿ, ಬೆಂಗಳೂರು ಕಟ್ಟಿದರು. ಈಗ ನಾನಾ ಭಾಷೆಯ ಜನರು ಈ ನೆಲದಲ್ಲಿ ನೆಮ್ಮದಿಯಿಂದ ಬದುಕುತ್ತಿದ್ದಾರೆ. ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್, ತಮ್ಮ ಹೆಂಡತಿಯ ಆಭರಣಗಳನ್ನು ಮಾರಿ, ಕನ್ನಂಬಾಡಿ ಕಟ್ಟೆ ಸೇರಿದಂತೆ ಸಮಾಜಮುಖಿ ಕೆಲಸಕ್ಕೆ ಮುಂದಾದವರು. ಇಂತಹ ಮಹಾತ್ಮರ ಕೊಡುಗೆಯಿಂದಾಗ ಕರುನಾಡು ನೆಮ್ಮದಿಯಾಗಿ ನೆಲೆಯೂರಿತ್ತು.

ಈ ಪುಣ್ಯಾತ್ಮರ ಕೊಡುಗೆಯನ್ನು ನಾವು ಸ್ಮರಿಸಬೇಕಿದೆ. ಇವರು ಹಾಕಿಕೊಟ್ಟ ಹಾದಿಯಲ್ಲಿ ನಾವಿಂದು ನಡೆಯಬೇಕಾದ ಅನಿವಾರ್ಯತೆ ಎದುರಾಗಿದೆ.

ಕೊರೊನಾ ಕಾರಣದಿಂದಾಗಿ ನಮ್ಮ ನಾಡು ಸಂಕಷ್ಟದಲ್ಲಿದೆ. ಇನ್ನೂ ಅದೆಷ್ಟೋ ಜನರು ಹಸಿವಿನಿಂದ ನರಳುತ್ತಿದ್ದಾರೆ. ಚಿಕಿತ್ಸೆ ಸಿಗದೇ ಪರದಾಡುತ್ತಿದ್ದಾರೆ. ರೈತರು, ಕಾರ್ಮಿಕರು, ಎಲ್ಲ ವರ್ಗದ ಜನರು ಅಗತ್ಯ ವಸ್ತುಗಳ ನಿರೀಕ್ಷೆಯಲ್ಲಿದ್ದಾರೆ. ಅವರ ಕಣ್ಣೀರು ಒರೆಸುವಂತಹ ಕೆಲಸ ತುರ್ತಾಗಿ ನಮ್ಮಿಂದ ಆಗಬೇಕಿದೆ. ಅವರನ್ನು ಹಸಿವಿನಿಂದ ಬಿಡುಗಡೆಗೊಳಿಸಬೇಕಿದೆ. ನಮ್ಮೆಲ್ಲರ ಅನ್ನದಾತರಾದ ರೈತಾಪಿ ವರ್ಗ ಯಾವತ್ತಿಗೂ ತಮ್ಮ ಕೆಲಸ ನಿಲ್ಲಿಸಬಾರದು. ಹಾಗಾಗಿ ಅವರ ಸಹಾಯಕ್ಕೂ ನಾವು ನಿಲ್ಲಬೇಕಿದೆ. ನಾವೆಲ್ಲರೂ ಒಂದು ತಂಡವಾಗಿ ಈ ಕೆಲಸ ಮಾಡಬೇಕಿದೆ.

ಇಂಥದ್ದೊಂದು ಸಹಾಯಕ್ಕಾಗಿ ನಮ್ಮ ತಂಡ ಸಿದ್ಧವಾಗಿದೆ. ಯಾರಿಗಾದರೂ ಅಗತ್ಯ ಸೇವೆ, ಸಹಾಯ ಬೇಕಾಗಿದ್ದಲ್ಲಿ ನಮ್ಮನ್ನು ಸಂಪರ್ಕಿಸಬಹುದು. ಸಾಧ್ಯವಾದಷ್ಟು ನಿಮ್ಮ ಸಂಕಷ್ಟಗಳಿಗೆ ನಾವು ಸ್ಪಂದಿಸುತ್ತೇವೆ.

ನಿಮ್ಮ ಹೆಸರು, ಮೊಬೈಲ್ ನಂಬರ್‍ ಹಾಗೂ ವಿಳಾಸವನ್ನು ನಮ್ಮ mephin.com website ನಲ್ಲಿ ನೋದಾಯಿಸಿಕೊಳ್ಳಿ..Share your suffering with us ...

Coronavirus worldwide has caused people to panic. Life is insurmountable. Along with tying up hands to eat, the world has been bracing for the race. India and Karnataka are no exception.

Coronavirus has not been the latest in the last five months. Hundreds of people were sacrificed. The lives of countless people are numb. Millions of people have lost their jobs, and many still struggle with hunger. We have heard plenty of tears from across the state. So we have to stand with them.

Ours is the land of Saran. In the 12th century, the Shivashanas worked hard to build a hungry country through the Dasoha tradition. Nada Monasteries and temples, including the Siddagangashreees of Tumkur, have continued this dasa. Those of us living on such a good land need to work on providing rice to the belly of the hungry.

Nadaprabhu Kempegowda, who built Bangalore, sold his precious land and built Bangalore. Now people of Nana language are living happily in this ground. Nalvadi Krishnaraja Wodeyar of Mysore, who sold his wife's jewelry and pioneered social work including the Kannambadi building. With the contribution of such great men, Karunadu was at peace.

We must commemorate the contribution of these saints. The path that he laid down for us was a necessity.

Our land is in hardship because of the corona. Still, people are starving. Getting hurt without getting treatment. Farmers, laborers, people of all classes are in need. The work of wiping their tears urgently needs to be done by us. They need to be released from hunger. All of us, the farmers, should never stop working. So we need to stand by their help too. We all need to work on this as a team.

Our team is ready to help with such a thing. If anyone needs help, need help. We will respond to your hardship as much as possible.

Your name, mobile number and address are ours mephin.com Look at the website ..